Saturday, 14 July 2018

ಗೋವುಗಳ ಸಮಗ್ರ ನಿರ್ವಹಣೆ

ಗೋವುಗಳ ನಿರ್ವಹಣೆಗೆ ಮೊದಲು ಗೋವಿನ ಬಗ್ಗೆ ಒಂದಿಷ್ಟು ತಿಳುವಳಿಕೆ ಅಗತ್ಯ. ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದರೆ 4 ಅಂಶಗಳನ್ನು ಗಮನಿಸಿಕೊಳ್ಳಬೇಕಿದೆ‌‌.
* ಸಾಮಾಜಿಕ ಚಿಂತನೆ
* ಅರ್ಥಿಕ ಚಿಂತನೆ
* ಪ್ರಾಕೃತಿಕ ಚಿಂತನೆ
* ಆಧ್ಯಾತ್ಮಿಕ ಚಿಂತನೆ
ಮೇಲಿನ ನಾಲ್ಕು ಅಂಶಗಳನ್ನು ಗಮನಿಸಿಕೊಂಡು ಯಾವುದೇ ನಿರ್ಧಾರಗಳನ್ನು ಕೈಗೊಂಡಲ್ಲಿ  ಮಾತ್ರ ಅದು ಸಮಗ್ರತೆಯಿಂದ ಕೂಡಿದ ಭಾರತೀಯ ಮೂಲ ಚಿಂತನೆಗೆ ಪೂರಕವಾಗುತ್ತದೆ.
ಗೋವುಗಳ ನಿರ್ವಹಣೆಯಲ್ಲೂ 4 ಅಂಶಗಳನ್ನು ಗಮನಿಸಿಕೊಳ್ಳಬೇಕು. ಆ ದೃಷ್ಟಿಯಲ್ಲಿ ಗೋವಿನ ನಿರ್ವಹಣೆ ಹೇಗಿರಬೇಕೆಂದು ತಿಳಿಯಲು ಪ್ರಯತ್ನಿಸೋಣ.

ಗೋವು - ನಾವು ಒಂದಿಷ್ಟು ಕಲಿಕೆ

ಸಮಗ್ರತೆಯ ಗೋವುಗಳ ನಿರ್ವಹಣೆ.

ಗೋವುಗಳಿಗೂ ಮನುಷ್ಯನಿಗೂ ಬಹಳ ಹತ್ತಿರದ ಸಂಬಂಧ ಅನಾದಿ ಕಾಲದಿಂದಲೂ ಇದೆ. ನಮ್ಮ  ಪ್ರತಿಯೊಂದು ಚಟುವಟಿಕೆಗಳಿಗೂ ಕೃಷಿಯೇ ಮೂಲ ಆಧಾರ. ಕೃಷಿ ಇಲ್ಲದೇ ಯಾವುದೇ ಉದ್ಯೋಗಗಳನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸಮಗ್ರ ಜಗತ್ತಿನ ಪಾಲನೆ-ಪೋಷಣೆ ಕೃಷಿಕನ ಕರ್ತವ್ಯವಾದ್ದರಿಂದ ತಾಯಿಯ ಸ್ಥಾನ ಕೃಷಿಕನದು.

ಕೃಷಿಗೆ ಗೋವು ಅವಿಭಾಜ್ಯ ಅಂಗ. ಗೋ ಅಧಾರಿತ ಕೃಷಿ ಜೀವನ ಪದ್ಧತಿಯನ್ನು ಅಳವಡಿಸಿಕೊಂಡು ಸ್ವಾವಲಂಬಿಗಳಾಗಿ ಸ್ವಸ್ಥಜೀವನವನ್ನು ನಡೆಸಬಹುದು.